ಕು.ಪ್ರಾರ್ಥನಾರಿಂದ ’ನೃತ್ಯ ಸಂಧ್ಯಾ’ ಕಾರ್ಯಕ್ರಮ

DSC_4553ಪುತ್ತೂರು ರೋಟರಿ ಕ್ಲಬ್‌ನವರು ಜನವರಿ 15ರಂದು ಸಂಜೆ ರೋಟರಿ ಜಿ.ಎಲ್.ಸಭಾ ಭವನದಲ್ಲಿ ನಡೆಸಿದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಖ್ಯಾತ ದಂತವೈದ್ಯರಾದ ರೊಟೇರಿಯನ್ ಡಾ.ಶ್ರೀಪ್ರಕಾಶ್ ಮತ್ತು ಶ್ರೀಮತಿ ಅರ್ಚನಾ ಪ್ರಕಾಶ್‌ರವರ ಪುತ್ರಿ ಕು.ಪ್ರಾರ್ಥನಾರವರಿಂದ ’ನೃತ್ಯ ಸಂಧ್ಯಾ’ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ರಫೀಕ್.ಎಂ.ಜೆ., ಶ್ರೀಕಾಂತ್ ಕೊಳತ್ತಾಯ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ.ಶ್ರೀಪ್ರಕಾಶ್ ಮತ್ತು ಶ್ರೀಮತಿ ಅರ್ಚನಾ ಪ್ರಕಾಶ್‌ರವರನ್ನು ಸನ್ಮಾನಿಸಲಾಯಿತು. ತದನಂತರ ಕು.ಪ್ರಾರ್ಥನಾರವರಿಂದ ’ನೃತ್ಯ ಸಂಧ್ಯಾ’ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ನಟುವಾಂಗ ಗುರು ದೀಪಕ್ ಕುಮಾರ್, ಹಾಡುಗಾರಿಕೆ ವಿದುಷಿ ಪ್ರೀತಿಕಲಾ, ಮೃದಂಗ ವಿದ್ವಾನ್ ನಿಕ್ಷಿತ್ ಹಾಗೂ ಪಿಟೀಲಿನಲ್ಲಿ ಕು.ಧನ್ಯಶ್ರೀ ಇವರು ಭಾಗವಹಿಸಿದ್ದರು.