ನೃತ್ಯಾಂತರಂಗ ಸಪ್ತಾಹದಲ್ಲಿ ಶ್ರೀಮತಿ ದೀಪಾ ಭಟ್ ಇವರಿಂದ ಭರತನಾಟ್ಯ ಕಾರ್ಯಕ್ರಮ

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಪುತ್ತೂರು ಇವರು ನಡೆಸುವ ಒಂದು ವಾರದ ‘ನೃತ್ಯಾಂತರಂಗ ಸಪ್ತಾಹ’ದಲ್ಲಿ ಮೂರನೆಯ ದಿನ ಏಪ್ರಿಲ್ 25 ರಂದು ಶ್ರೀಮತಿ ದೀಪಾ ಭಟ್, ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮವು ಪುತ್ತೂರಿನ ‘ಶಶಿ-ಶಂಕರ’ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಪ್ರೌಢ ಶಾಲೆಯ ಶಿಕ್ಷಕಿ ಶ್ರೀಮತಿ ಶಾಂತ ಕುಮಾರಿಯರವರು ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು. ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ಕುಮಾರಿ ಸಾನ್ವಿ ಕಜೆ ಮತ್ತು ಕುಮಾರಿ ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.