ನೃತ್ಯಾಂತರಂಗ ಸಪ್ತಾಹದಲ್ಲಿ ಶ್ರೀ ಶರತ್ ಸೂರ್ಯನಾರಾಯಣರಿಂದ ಭರತನಾಟ್ಯ ಕಾರ್ಯಕ್ರಮ

ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.) ಪುತ್ತೂರು ಇವರು ನಡೆಸುವ ಒಂದು ವಾರದ ‘ನೃತ್ಯಾಂತರಂಗ ಸಪ್ತಾಹ’ದಲ್ಲಿ ಎರಡನೆಯ ದಿನ ಏಪ್ರಿಲ್ 24 ರಂದು ಶ್ರೀ ಶರತ್ ಸೂರ್ಯನಾರಾಯಣ್, ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮವು ಪುತ್ತೂರಿನ ‘ಶಶಿ-ಶಂಕರ’ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕರಾದ ಪ್ರೊ.ಬಿ.ಜೆ.ಸುವರ್ಣರವರು ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು. ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ಕುಮಾರಿ ಶ್ರೀಲಕ್ಷ್ಮೀ ಮತ್ತು ಕುಮಾರಿ ಶರಣ್ಯ ರೈ ಕಾರ್ಯಕ್ರಮ ನಿರ್ವಹಿಸಿದರು.